ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಲ್ಲುಂಡೆಯಲ್ಲಿ (ಜನನ: 08-01-1933) ಶ್ರೀನಿವಾಸ ಉಡುಪರು ಹುಟ್ಟಿದರು. ತಂದೆ ಸುಬ್ಬರಾಯ ಉಡುಪರು, ತಾಯಿ ವೆಂಕಟಲಕ್ಷ್ಮಮ್ಮ. 2 ವರ್ಷದ ಮಗುವಿದ್ದಾಗಲೇ ತೀವ್ರ ಜ್ವರದಿಂದ ಕಾಲುಗಳ ಶಕ್ತಿ ಕಳೆದುಕೊಳ್ಳಬೇಕಾಯಿತು. 8ನೇ ವರ್ಷಕ್ಕೆ ತಂದೆ-ತಾಯಿಯನ್ನು ಕಳೆದುಕೊಂಡರು. ಸಹೋದರ ಮಾವನವರಲ್ಲಿ ಬೆಳೆದರು. ಗಾಜನೂರಿನಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ ಪಡೆದರು ಮನೆಯಲ್ಲಿ ಹಿಂದಿ ಭಾಷೆ. ಶಿಕ್ಷಣ ಮುಂದುವರಿಸಲಾಗದೇ ತೀರ್ಥಹಳ್ಳಿಯ ಅರಳಿಸುರಳಿ ಮಾಧ್ಯಮಿಕ ಶಾಲೆಯ ಶಿಕ್ಷಕರಾದರು. ಹೆದ್ದೂರು, ಹೊಸನಗರದ ವಿದ್ಯಾಧಿಕಾರಿಗಳ ಕಚೇರಿಯ ಗುಮಾಸ್ತರಾದರು. ನಂತರ ಶರಾವತಿ ಕಣಿವೆ ಯೋಜನೆಯ ಲೋಕೋಪಯೋಗಿ ಇಲಾಖೆಗೆ ಸೇರಿ ಕಾರ್ಗಲ್ಲಿನಲ್ಲಿ ಗುಮಾಸ್ತರಾಗಿ ಸೇರಿದರು.
ಶ್ರೀಮುಖ’, ‘ಹೋಶ್ರೀ’, ‘ಶ್ರೀಶ’ ಕಾವ್ಯನಾಮಗಳಿಂದ ಕಥೆ, ಕವನ ಕಾದಂಬರಿಗಳನ್ನು ಬರೆದಿದ್ದಾರೆ. ಸುಮಾರು 60 ಕಾದಂಬರಿಗಳು, 17 ಕಥಾಸಂಕಲನಗಳು, 16 ಮಕ್ಕಳ ಕೃತಿಗಳು, 6 ನಾಟಕಗಳು, 8 ಸಂಪಾದಿತ ಕೃತಿಗಳು, ಒಂದು ವಿಮರ್ಶೆ ಹಾಗೂ ಒಂದು ಕ್ಷೇತ್ರ ದರ್ಶನ ಕೃತಿಗಳು ಸೇರಿವೆ.
ಕಥಾ ಸಂಕಲನಗಳು: ಮನೆಗೆ ಬಂದ ಮಗಳು’ (1947) ‘ನಿರಾಶೆಯ ಕೊನೆಯಲ್ಲಿ’ (1959), ಕಪ್ಪುಬೆಳಗಿತು, ಅವಳ ಕಥೆ (1960), ಬದುಕು, ಹೆಗ್ಗಡತಿ ಹೆತ್ತ ದೆವ್ವ (1975), ಹೊಸ ಕಥೆಗಳು, ಪುರಾಣ ಕಥೆಗಳು, , ಸಂಭಾವಿತ .ಕಾದಂಬರಿಗಳು: : ಕೆಂಪುತುಟಿ, ಅವ, ಸೋತ ಹೃದಯ, ಹೆಣ್ಣಿನ ಹೃದಯ, ಮನೆಗೆ ಬಂದವಳು ಇತ್ಯಾದಿ 60 ಕಾದಂಬರಿಗಳು, ಶಿವಮೊಗ್ಗ ಜಿಲ್ಲಾ ಬರಹಗಾರರ ಸಂಘ, ಸಾಗರ ಕನ್ನಡ ಸಂಘ, ನವಚೇತನ ಯುವ ಸಂಘ, ರಾಷ್ಟ್ರೋತ್ಥಾನ ಬಳಗ, ಮಲೆನಾಡು ಗಮಕ ಕಲಾ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತಿನ ನಾಗರಿಕ ವೇದಿಕೆ ಹೀಗೆ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬರಹಗಾರರ ಸಮ್ಮೇಳನ, ಹುಂಚದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ, ಸಾಗರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಹೀಗೆ ವಿವಿಧ ಹುದ್ದೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ.
ಪ್ರಶಸ್ತಿ-ಗೌರವಗಳು: ‘ಅವರು ಭೂತನಾಡನ್ನು ದಾಟಿ ಬಂದರು’ ಕಥೆಗೆ (1960) ಬೆಂಗಳೂರಿನ ಪೀಪಲ್ ಆರ್ಟಿಸ್ಟ್ಸ್ ಅಸೋಸಿಯೇಷನ್ ಪ್ರಶಸ್ತಿ; ‘ಅಮೃತಮಯಿ’ ನಾಟಕಕ್ಕೆ (1962)ಬೆಂಗಳೂರು ಆಕಾಶವಾಣಿ ಪ್ರಶಸ್ತಿ; ‘ಒಲಿದು ಬಂದವಳು’ ಕಾದಂಬರಿಗೆ (1967) ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ; ‘ರೇಷ್ಮೆಸೀರೆ’ ನಾಟಕಕ್ಕೆ ವಿಶಾಲ ಕರ್ನಾಟಕ ದೀಪಾವಳಿ ನಾಟಕ ಸ್ಪರ್ಧಾ ಪ್ರಶಸ್ತಿ; ‘ಸಂಭಾವಿತ’ ಕಥಾಸಂಕಲನಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ; ಲಕ್ಷ್ಮೀ ಶ್ರೀನಿವಾಸ ಕಾದಂಬರಿಗೆ ತಿರುಪತಿ ತಿರುಮಲ ಧಾರ್ಮಿಕ ಪ್ರಶಸ್ತಿ ಲಭಿಸಿದೆ. ಇವರು 2000ರ ಮಾರ್ಚ್ 9 ರಂದು ನಿಧನರಾದರು.