ಕವಿ ಶ್ರೀನಿವಾಸ ನಾಯಕ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದವರು. ಸದ್ಯ ಬೆಂಗಳುರಿನಲ್ಲಿ ವಾಸವಿದ್ದು,ಕುವೆಂಪು ವಿ.ವಿ.ಯಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್.ಸಿ. ಪದವೀಧರರು. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಿ. ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದಲ್ಲಿ "ಯುವ ಜನ ಕವಿಗೋಷ್ಟಿ"ಯ ಅಧ್ಯಕ್ಷತೆವಹಿಸಿದ್ದರು. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ.