ಶೀನಾ ನಾಡೋಳಿಯವರು ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮದ ನಾಡೋಳಿಯವರು. ಕುಜುಂಬ ಅಜಿಲ ಮತ್ತು ಬಿಡುಗು ದಂಪತಿಯ ಪುತ್ರರಾಗಿರುವ ಇವರು, ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಂಜ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನಲ್ಲಿ ಪೂರೈಸಿದ್ದಾರೆ. ಮಂಗಳೂರು ವಿಶ್ಯಾವಿದ್ಯಾನಿಲಯದಿಂದ ಇಂಗ್ಲೀಷ್ ಎಂ.ಎ. ಸ್ನಾತಕೋತ್ತರ ಪದವೀಧರರಾಗಿರುವ ಇವರು ನೀನಾಸಂ ನಲ್ಲಿ ಒಂದು ವರ್ಷ ಡಿಪ್ಲೊಮಾ ಮತ್ತು ಒಂದು ವರ್ಷ ತಿರುಗಾಟ ನಾಟಕದಲ್ಲಿ ಅಭಿನಯಿಸಿದ್ದಾರೆ. ರಂಗನಿರ್ದೇಶಕರಾಗಿರುವ ಇವರು ಮಕ್ಕಳಿಗೆ ನಾಟಕ ತರಬೇತಿಗಳನ್ನು ನೀಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಇವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪುಂಜಲಕಟ್ಟೆ ಸ.ಪ.ಪೂ.ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಹಲವಾರು ಲೇಖನಗಳು, ಅನುವಾದಗಳನ್ನು ಮಾಡಿದ್ದಾರೆ. ಇವರಿಗೆ 2018ರ ʻಜ್ಞಾನ ಸಂಜೀವಿನಿ ಪ್ರಶಸ್ತಿʼ ಲಭಿಸಿದೆ. ಕೃತಿಗಳು: ʻಸುದೈತ ಮಟೈಲ್ಡ್ ಕತೆʼ (ತುಳು), ಹಾಗೂ ಅನುವಾದ ಕೃತಿಗಳಾದ ʻಭಯಮುಕ್ತ ಬದುಕಿನೆಡೆಗೆʼ, ʻಹಕ್ಕೊತ್ತಾಯʼ.