ಶಾರದಾ ಮೂರ್ತಿ ಅವರು ಹವ್ಯಾಸಿ ಲೇಖಕಿ. ರಾಜ್ಯ ಮಟ್ಟದ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. ಅಮೆರಿಕಾದ ಶಿಕಾಗೋ ನಗರದ ವಿದ್ಯಾರಣ್ಯ ಕನ್ನಡ ಸಂಘದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಹಾಸ್ಯಲೇಖನ, ಕವನ ವಾಚನ ಮಾಡಿದ್ದಾರೆ. ಅಲ್ಲಿಯ 'ಸಂಗಮ' ಎನ್ನುವ ವಿಶೇಷಾಂಕದಲ್ಲಿ ಹಲವಾರು ವರ್ಷಗಳಿಂದ ಲೇಖನಗಳು ಪ್ರಕಟವಾಗುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿದ ಇವರಿಗೆ ಮೊದಲಿನಿಂದಲೂ ಕನ್ನಡ ಭಾಷೆಯ ಮೇಲೆ ಅದಮ್ಯ ಪ್ರೀತಿ. ಹಾಗಾಗಿ ತಮ್ಮ 50ನೇ ವಯಸ್ಸಿನಲ್ಲಿ ಕನ್ನಡದಲ್ಲಿ ಎಂ. ಎ. ಪದವಿಯನ್ನು ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿ ಆಗಿದ್ದ ಪತಿಯ ಜೊತೆ ದೇಶಾದ್ಯಂತ ತಿರುಗಾಟ. ಬೇರೆಬೇರೆ ತರಹದ ಜನಜೀವನದ ಕುರಿತು ಕುತೂಹಲ ಹಾಗೂ ಕಾತುರ ಇವರದು. ದೆಹಲಿ ಹಾಗೂ ಕೊಲ್ಕತ್ತಾ ಕನ್ನಡ ಸಂಘಗಳಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಹೀಗೆ, ಪ್ರವಾಸ, ಓದು, ಕಸೂತಿ, ಕಥೆ ಕವನ ಬರೆಯುವುದು, ನಾಟಕ ಆಡುವುದು ಶಾರದಾ ಮೂರ್ತಿ ಅವರ ಹವ್ಯಾಸಗಳು. ಇವರ ಪ್ರಥಮ ಕೃತಿ ʻಪಲಾಯನ ಮತ್ತು ಇತರ ಕತೆಗಳುʼ.