About the Author

ಶಮಂತಕಮಣಿ ನರೇಂದ್ರನ್ ಸಿ ಅವರು ವೃತ್ತಿಯಲ್ಲಿ ವೈದ್ಯರು. ಎಂ.ಬಿ.ಬಿ.ಎಸ್., ಎಂ.ಡಿ. (ಪೀಡಿಯಾಟಿಕ್) ಡಿಸಿಎಚ್ (ಲಂಡನ್ ರಾಯಲ್ ಕಾಲೇಜ್) ಎಂ.ಎ. (ಕನ್ನಡ), ಎಂ.ಎ. (ತತ್ತ್ವಶಾಸ್ತ್ರ) ಪತ್ರಿಕೋದ್ಯಮ ಡಿಪ್ಲೊಮಾ ಪದವಿಗಳನ್ನು ಪಡೆದಿದ್ದಾರೆ.

ಜನಿಸಿದ್ದು ೧೬-೯-೧೯೩೦, ಶಿವಮೊಗ್ಗ ಜಿಲ್ಲೆಯಲ್ಲಿ. ತಂದೆ  ಕುಂಸಿ ಶ್ರೀನಿವಾಸಲು ನಾಯ್ತು, ತಾಯಿ ಜಗದಾಂಬ. ವೈದ್ಯರಾಗಿರುವ ಇವರ ಸಾಹಿತ್ಯ ರಚನೆ ಬಹುತೇಕ ಆರೋಗ್ಯಕ್ಕೆ ಸಂಬಂಧಿಸಿದ ಕೃತಿಗಳನ್ನೇ ಪ್ರಕಟಿಸಿದ್ದಾರೆ.

ನಮಗೆಂಥ ಮಕ್ಕಳು ಬೇಕು ೧೯೮೫, ಪ್ರಸವಕ್ಕೆ ಮೊದಲೇ ಮಗುವಿನ ಭವಿಷ್ಯ ೧೯೮೫., ಗರ್ಭಿಣಿಯರಿಗೆ ಯೋಗ, Yoga for Pregnancy. ಮುಂತಾದ ಕೃತಿಗಳು ರಚನೆಗೊಂಡಿದೆ.

ಮಹಿಳಾ ವೈದ್ಯರ ಸಂಸ್ಥೆಯ ಮಾಜಿ ಅಧ್ಯಕ್ಷೆ, ಮಕ್ಕಳ ತಜ್ಞರ ಸಂಘದ ಮಾಜಿ ಅಧ್ಯಕ್ಷೆ, ರೋಟರಿ ಕ್ಲಬ್ ಪಾಲ್ ಹ್ಯಾರಿಸ್ ಫೆಲೊ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷೆಯಾಗಿ ಗೌರವ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಶಸ್ತಿ: ಲೇಡಿ ಕಮಲ ವರ್ಮನ್ ಸ್ಮಾರಕ ಪ್ರಶಸ್ತಿ, ಗಾರ್ಗಿ ಪ್ರಶಸ್ತಿ, ಇಂದಿರಾಗಾಂಧಿ ಪ್ರಶಸ್ತಿ, ಎಸ್.ವಿ.ಗೋವಿಂದಶೆಟ್ಟಿ ಪ್ರಶಸ್ತಿ ಇವರಿಗೆ ಸಂದಿದೆ.

ಶಮಂತಕಮಣಿ ನರೇಂದ್ರನ್