About the Author

ಲೇಖಕಿ ಶೈಲಜಾ ಶರಣಗೌಢ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲಾ (ಬಿ) ಗ್ರಾಮದವರು. ತಂದೆ ಶರಣಗೌಡ, ತಾಯಿ ಮಹಾದೇವಿ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಜೇವರ್ಗಿಯಲ್ಲಿ ಪ್ರೌಢ ಶಿಕ್ಷಣ, ಪಿಯುಸಿ, ಬಿಎ, ಬಿ.ಇಡಿ ಪದವಿ ಪೂರೈಸಿದರು. 
ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ದಿಂದ ಎಂಟು ಸುವರ್ಣ ಪದಕಗಳು ಹಾಗೂ ಪ್ರಥಮ ರ್‍ಯಾಂಕ್ ನೊಂದಿಗೆ ಎಂ.ಎ. ಪದವಿ ಪಡೆದರು. ಪ್ರಸ್ತುತ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾಧ್ಯಯನ ಮುಂದುವರೆಸಿದ್ದಾರೆ.  

ಕೃತಿಗಳು: ಸಿರಿಕನ್ನಡ : ನುಡಿತೋರಣ  (ಪ್ರಾಚೀನ ಮಧ್ಯಕಾಲೀನ ಮತ್ತು ಆಧುನಿಕ ಕನ್ನಡ ಕಾವ್ಯಗಳಲ್ಲಿ ಹುದುಗಿರುವ ಕಾವ್ಯೋಕ್ತಿಗಳನ್ನು ಸಂಗ್ರಹ ಕೃತಿ-2020 ) ಇವರು ಬರೆದ ವೈವಿಧ್ಯಮಯ ವಿಷಯ ವಸ್ತುಗಳ ಕುರಿತು ಇವರು ಬರೆದ ಲೇಖನಗಳು ವಿವಿಧ ಪತ್ರಿಕೆ, ಸಂಸ್ಮರಣಾ ಗ್ರಂಥಗಳಲ್ಲಿ ಪ್ರಕಟವಾಗಿವೆ. 
ಪ್ರಸ್ತುತ  ಕನ್ನಡದಲ್ಲಿ ಬೌದ್ಧ ಸಾಹಿತ್ಯ ಕೃತಿ ಶ್ರೇಣಿಗಳು ಕುರಿತು ಸಂಶೋಧನ ಅಧ್ಯಯನ ಕೈಗೊಂಡಿದ್ದಾರೆ. 
 

ಶೈಲಜಾ ಶರಣಗೌಡ