ಸತೀಶ ಗರಣಿ ಅವರು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗರಣಿ (ಜನನ: 01-06-1984) ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಸತನ (ಕವನ ಸಂಕಲನ) ಹಾಗೂ ಮಡಿಲು (ಕಥಾ ಸಂಕಲನ). ಇವರ ಕಥೆ, ಕವನ, ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇವರಿಗೆ ಕೆಂಪೇಗೌಡ ಸಾಹಿತ್ಯ ಪ್ರಿಯ ಪ್ರಶಸ್ತಿ ಸಾಹಿತ್ಯ ಪರಿಷತ್ತಿನ ಯುವ ಬರಹಗಾರ ಪ್ರಶಸ್ತಿ ಸಾಹಿತ್ಯ ಶ್ರೀ ರತ್ನ ಮುಂತಾದ ಪ್ರಶಸ್ತಿಗಳು ಬಂದಿವೆ.