ಸರಸ್ವತಿ ಕೆ ನಾಗರಾಜ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಬಿ.ಕಾಂ. ಡಿ ಇಡಿ ಪದವೀಧರರು. ಕವನ, ಚುಟುಕು, ಲೇಖನಗಳ ಬರಹ ಅವರ ಹವ್ಯಾಸ. ವರದಿಗಾರರೂ ಹೌದು. ರಾಜ್ಯದ ವಿವಿಧೆಡೆ ನಡೆದ ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಕೃತಿಗಳು ; ಪಿಸುಗುಡುವ ಹಕ್ಕಿ (ಕವನ ಸಂಕಲನ)
ಪ್ರಶಸ್ತಿ-ಪುರಸ್ಕಾರಗಳು: ಕನ್ನಡ ಸೇವಾ ತಪಸ್ವಿ ಪ್ರಶಸ್ತಿ, ಇಂಚರ ಸಾಹಿತ್ಯ ಕುಟೀರದ ಕವಿ ಕಣ್ಮಣಿ ಪ್ರಶಸ್ತಿ, ಬೆಳದಿಂಗಳ ಸಾಹಿತ್ಯ ಬಳಗದ ಸಾಹಿತ್ಯ ರತ್ನ ಪ್ರಶಸ್ತಿ, ಕಲಾದೇಗುಲ ಭಾವನೆಗಳ ಸಂಗಮ ವೇದಿಕೆಯ ಕವಿ ಕುಸುಮ ಪ್ರಶಸ್ತಿ, ಇಂಚರ ಸಾಹಿತ್ಯ ಕುಟೀರದ ಕನ್ನಡ ಕಣ್ಮಣಿ ಪ್ರಶಸ್ತಿ, ಕನ್ನಡದ ಕವನ ಕಣ್ಮಣಿ (ಚಿತ್ರ ಕಾವ್ಯ ಅಭಿಯಾನ ಕರ್ನಾಟಕ ವೇದಿಕೆ), ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ (ಬೆಳಕು ಸಾಹಿತ್ಯ ಸಮ್ಮೇಳನ), ಕರುನಾಡ ಸಾಧಕ ರತ್ನ ಪ್ರಶಸ್ತಿ( ಕರುನಾಡ ಹಣತೆ ಕವಿ ಬಳಗ), ಕನ್ನಡ ಸೇವಾ ರತ್ನ ಪ್ರಶಸ್ತಿ ಮತ್ತು ಸಾಹಿತ್ಯ ರತ್ನ ಪ್ರಶಸ್ತಿ (ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು)