About the Author

ಸಂಗಮೇಶ್ವರ ಶಿ.ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದವರು. ತಂದೆ ಶಿವಾನಂದ ಕುಲಕರ್ಣಿ, ತಾಯಿ ಮಹಾದೇವಿ. ತಮ್ಮ ಊರಾದ ಬೂದಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡಿಕೇರಿಯ ಎಸ್.ಆರ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಬೈಲಹೊಂಗಲದಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿ, ಕರ್ನಾಟಕ  ವಿಶ್ವವಿದ್ಯಾಲಯ ಧಾರವಾಡದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೈಲಹೊಂಗಲದ ಎಸ್.ಬಿ.ಐ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರು.

ಹವ್ಯಾಸಿ ಬರಹಗಾರರು. ಇವರ ಹಲವು ಕವಿತೆ, ಚುಟುಕುಗಳು ಬೆಳಗಾವಿಯ ಸ್ಥಳೀಯ ಹಾಗೂ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವನ, ಅಂಕಣ ಬರಹ ಇವರ ಆಸಕ್ತಿ. "ಅವಳ ಪ್ರೇಮದ ಕುರುಹುಗಳು" ಅವರ ಚೊಚ್ಚಲ ಕೃತಿ. 

ಸಂಗಮೇಶ್ವರ ಶಿ.ಕುಲಕರ್ಣಿ

(04 Apr 1988)