ಎಸ್. ಪಿ ವಿಜಯಲಕ್ಷ್ಮಿ ಅವರು ಮೂಲತಃ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದವರು. ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ನರಸಿಂಹರಾಜಪುರದಲ್ಲಿ ಮತ್ತು ಪಿಯುಸಿ ನಂತರದ ವಿದ್ಯಾಭ್ಯಾಸವನ್ನು ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಪೂರೈಸಿದರು. ವಿಜಯ ಕರ್ನಾಟಕ, ಸುಧಾ, ತರಂಗ, ಕರ್ಮವೀರ, ತುಷಾರ, ಮಂಗಳ ಪತ್ರಿಕೆಗಳಿಗೆ ಕಥೆ, ಕವನ, ಮಹಿಳಾಲೇಖನ, ಪ್ರವಾಸ ಲೇಖನಗಳನ್ನು ಬರೆಯುತ್ತಿರುವೆ. ಕನ್ನಡ ರಾಜ್ಯೋತ್ಸವದ ಸುವರ್ಣಮಹೋತ್ಸವ ವರ್ಷದಲ್ಲಿ ಬಹಳಷ್ಟು ವೇದಿಕೆಗಳ ಹತ್ತಿಪ್ಪತ್ತು ಕವನಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದ್ದಾರೆ. "ಮಂಗಳ" ವಾರಪತ್ರಿಕೆಯಲ್ಲಿ ಮೂರು ವರ್ಷಗಳು ಬೇರೆ ಬೇರೆ ದೇಶಗಳ "ಪ್ರವಾಸ ಕಥನ" ನಿರಂತರ ಧಾರಾವಾಹಿಯಾಗಿ ಪ್ರಕಟವಾಗಿದೆ.
ಕೃತಿಗಳು : ಚಿತ್ತ ತೂಗಿದಾಗ ಮತ್ತು ಹೂಬಿಸಿಲು, ಪರಂಪರೆಯ ನೆರಳಲ್ಲಿ , ಚಿಲಿಪಿಲಿ ಗೂಡು, ಪುಟ್ಟ ಪುಟ್ಟಿಗೆ ಪುಟ್ಟ ಹಣತೆ, ನಿಂತರದು ನೀರಲ್ಲ ಕ್ಷಮೆಯಿರಲಿ ತಾಯಿ ತುಂಗೆ, ಸುರಗಿ ತೊರೆ,ಪ್ರೇಮ ತಪಸ್ವಿನಿ ಚಿತ್ರಾಂಗದೆ , ಬಂಡೆ ಬಿರುಕಿನ ಹೂ, ಅಂಗಳಕೆ ಬಂದ ಹಕ್ಕಿ, ಮೌನ ಕಣಿವೆಯಲ್ಲಿ, `ಸಾಗರದಾಚೆಯ ನಾಡಿನಲಿ' , 'ತಿರೆಯ ತೀರಗಳಲ್ಲಿ' , 'ನಕ್ಷತ್ರಗಳ ನೆಲದಲ್ಲಿ' ಇವು ಯೂರೋಪ್ , ಚೈನಾ, ಅಲಾಸ್ಕಾ, ಜಪಾನ್, ಥಾಯ್ಲೆಂಡ್ ಮತ್ತು ಕಾಂಬೋಡಿಯಾ
ಪ್ರಶಸ್ತಿಗಳು : ತ್ರಿವೇಣಿ ದತ್ತಿ ಪ್ರಶಸ್ತಿ, ಗುಬ್ಬಿ ಸೋಲೂರು ಮುರುಗಾರಾಧ್ಯ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಕಾದಂಬರಿ ಪ್ರಶಸ್ತಿ, ಲೇಖಿಕಾ ಸಾಹಿತ್ಯ ವೇದಿಕೆ ಪ್ರಶಸ್ತಿ, ಕರ್ನಾಟಕ ಸಂಘದ ಪುಸ್ತಕ ಪ್ರಶಸ್ತಿ.