ಲೇಖಕ ಎಸ್. ಎಚ್. ಶಫೀಉಲ್ಲ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮದವರು. ತಂದೆ - ಟೀಪುಸಾಹೇಬ್, ತಾಯಿ - ಯಮುನಾಬಿ. ರಂಗಭೂಮಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ರಂಗಭೂಮಿಯನ್ನೇ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಪ್ರೌಢಶಾಲೆ - ಕಾಲೇಜು ಹಂತಗಳಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿ ಕಲೆಯ ಜಾಡಿನಲ್ಲಿ ಮುಂದುವರೆದರು. ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕದಂತಹ ಎಲ್ಲಾ ತರಹದ ನಾಟಕಗಳಲ್ಲೂ ತಮ್ಮ ಅಭಿನಯ ಚಾತುರ್ಯವನ್ನು ಓರೆಗೆ ಹಚ್ಚಿದವರು.
ಎಂ ಎ., ಎಂ ಇಡಿ., ಸ್ನಾತಕೋತ್ತರ ಪದವೀದರರಾದ ಇವರು ಪದವಿ ಮತ್ತು ಡಿ.ಇಡಿ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸಂಧ್ಯಾ ರಗಳೆ ಮತ್ತು ಇತರ ಕಥೆಗಳು’ ಅವರ ಚೊಚ್ಚಲ ಕೃತಿ. ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಕರುನಾಡು ರತ್ನ ಪ್ರಶಸ್ತಿ, ಕರುನಾಡು ಚುಟುಕುಶ್ರೀ ಪ್ರಶಸ್ತಿ, ಕವಿಭೀಮರತ ಪಶ ಅಶೋಕ್ ಪೈ ಸ್ಮರಣ ಪ್ರಶಸ್ತಿ, ಸಿದ್ದಗಂಗಾ ಸೇವಾರತ್ನ ಪ್ರಶಸ್ತಿ ಹೀಗೆ ಹಲವು ಪಶಸ್ತಿಗಳು ಸಂದಿವೆ.