ಲೇಖಕಿ ರೇಷ್ಮಾ ಉಮೇಶ ಅವರು ವೃತ್ತಿಯಲ್ಲಿ ಶಿಕ್ಷಕರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಭಾವಿಕೇರಿಯ ಮಾಣೇಶ್ವರ ನಾಯಕ ಹಾಗೂ ಶಾಂತಿ ನಾಯಕ ಅವರ ಪುತ್ರಿ. ಜಿಲ್ಲೆಯ ಕವಿ ಗಾಯಕ ಉಮೇಶ ಮುಂಡಳ್ಳಿ ಅವರ ಪತ್ನಿ.
ಬೆಂಗಳೂರಿನ ವೈಮಾನಿಕ ತರಬೇತಿ ಸಂಸ್ಥೆ (ADA)ನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದ ರೆಷ್ಮಾ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯಕ್ಕೆ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ ಭಟ್ಕಳ ಚಿತ್ರಾಪುರದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದಾರೆ.
ಹೊಂಗೆಯ ನೆರಳು ಇವರ ಮೊದಲ ಕವನ ಸಂಕಲನ. 2010 ರಲ್ಲಿ ಇವರ ಹೊಂಗೆಯ ನೆರಳು ಕೃತಿಗೆ ಹೊಂಬೆಳಕು ಸಾಂಸ್ಕೃತಿಕ ಸಂಸ್ಥೆ ಬೆಳಗಾವಿ ಇವರಿಂದ ರಾಷ್ಟ್ರಕೂಟ. ಸಾಹಿತ್ಯ ಶ್ರೀ ಪ್ರಶಸ್ತಿ ಪಡೆದಿರುತ್ತಾರೆ. 2019 ರಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ರಾಜ್ಯೋತ್ಸವ ಯುವ ಪುರಸ್ಕಾರ ಸಹ ಪಡೆದಿರುತ್ತಾರೆ.
ಪ್ರತಿಭಾವಂತ ಕವಯಿತ್ರಿ ರೇಷ್ಮಾ ಉಮೇಶ ಅವರ ಎರಡನೇ ಕೃತಿ ಆತ್ಮ ನಿವೇದನೆ ಒಂದು ಉತ್ತಮ ಕಥಾ ಸಂಕಲನ. ಸದ್ಯ ಶ್ರೀವಲ್ಲಿ ಪ್ರೌಢಶಾಲಾ ಚಿತ್ರಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.