ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ರಂಗಮ್ಮ ಹೊದೇಕಲ್ ಅವರು ಅಪ್ಪಟ ಗ್ರಾಮೀಣ ಪ್ರತಿಭೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ತಮ್ಮ ಅಂದವಾದ ಕೈ ಬರಹದಿಂದ ಕಳೆದ 15 ವರ್ಷಗಳಿಂದ ಶೈನಾ ಮಾಸಪತ್ರಿಕೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸ್ಥಳೀಯ ಪತ್ರಿಕೆಯ ಅಂಕಣಕಾರರಾಗಿದ್ದಾರೆ. ನಾಡಿನ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.
ಮುಂಬಯಿ ಕನ್ನಡ ಸಂಘ, ಮೈಸೂರಿನ ಕನ್ನಡ ಕಾವಲು ಸಮಿತಿ, ತುಮಕೂರಿನ ಭೂಮಿ ಬಳಗ, ರೋಟರಿ ಸಂಸ್ಥೆ, ಜಿಲ್ಲಾ ಲೇಖಕಿಯರ ಸಂಘ, ಮಹಿಳಾ ಸಂಘಟೆಯ ಸನ್ಮಾನ ಗೌರವಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ವಿಶಿಷ್ಟ ಲೇಖಕಿ ಪ್ರಶಸ್ತಿ ಪುರಸ್ಕೃತರು.