ಮೂಲತಃ ಕೊಡಗಿನವರಾದ ರಮ್ಯ ಕೆ.ಜಿ ಮೂರ್ನಾಡು ಪ್ರಸ್ತುತ ಮಡಿಕೇರಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ಧಾರೆ. 1986 ಅಕ್ಟೋಬರ್ 05 ಜನನ. ಈ ತಲೆಮಾರಿನ ಹೊಸ ತಲ್ಲಣಗಳನ್ನು ಕವಿತೆಗಳ ಮೂಲಕ ಮನಸ್ಸಿಗೆ ದಾಟಿಸುವ ಯುವ ಕವಯಿತ್ರಿ. ‘ದಾಹಗಳ ಮೈ ಸವರುತ್ತಾ’ -ಇವರ ಮೊದಲ ಕವನ ಸಂಕಲನ. ಹಲವಾರು ಕವಿತೆಗಳು ನಾಡಿನ ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.