ಡಾ. ರಮೇಶ ಎಂ. ಸೋನಕಾಂಬಳೆ ಅವರು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 1997ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಿಂದ ಪಿಎಚ್.ಡಿ ಪದವೀಧರರು. ಅವರ 25ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, 4 ಲೇಖನಗಳು ಸಂಪಾದಿತ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಅವರು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯಾಗಿ ಮತ್ತು ಸಮಾಜಕಾರ್ಯ ವಿಭಾಗದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ನವದೆಹಲಿಯ 'ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್’ (ಐ.ಸಿ.ಎಸ್.ಎಸ್.ಆರ್) ಸಂಸ್ಥೆಯು ಅನುದಾನಿಸಿದ 2016ರಲ್ಲಿ ನಡೆದ 10 ದಿನಗಳ ಸಂಶೋಧನಾ ವಿಧಾನದ ಕಾರ್ಯಾಗಾರವನ್ನು (ರಿಸರ್ಚ್ ಮೆಥಡಾಲಜಿ ವರ್ಕ್ಶಾಪ್) ಆಯೋಜಿಸಿದ್ದರು. ‘ಸಮಾಜಕಾರ್ಯ’ ಅವರ ಪ್ರಮುಖ ಕೃತಿ.