ಕವಿ ರಾಘವೇಂದ್ರ ಇಟಗಿಯವರು ಗದಗ ಜಿಲ್ಲೆ ರೋಣ ತಾಲ್ಲೂಕಿನ ಇಟಗಿಯಲ್ಲಿ 1926 ಏಪ್ರಿಲ್ 6 ರಂದು ಜನಿಸಿದರು. ಇರಾ ಇವರ ಕಾವ್ಯನಾಮ. ತಾಯಿ ಸೀತಮ್ಮ, ತಂದೆ ಪ್ರಹ್ಲಾದಾಚಾರ್ಯ.
ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹೈದರಾಬಾದ್‌ನ ಆಕಾಶವಾಣಿಯಲ್ಲಿ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರು ಆಕಾಶವಾಣಿಯಲ್ಲಿ ‘ನವಸುಮ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿ ಹಲವಾರು ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸಾರ ಮಾಡಿದ್ದು ಜನಮಾನಸದಲ್ಲಿ ಜನಪ್ರಿಯತೆ ಗಳಿಸಿತ್ತು.
ಇವರ ಪ್ರಮುಖ ಕೃತಿಗಳೆಂದರೆ ವಸುಂಧರಾ ಗೀತೆಗಳು, ಕ್ಷಿತಿಜ ಕೋದಂಡ, ಸನ್ನದ್ಧ ಭಾರತ, ಬೆಳಕು ತುಂಬಿದ ಬಲ್ಬು, ಬಸವಗೀತೆ, ಕರುಳಿನ ಕಥೆ, ಆಗಸ ತೋಟದ ಹೂಗಳು.ಇವರು 22 ಅಕ್ಷರಗಳ 'ಮಿನಿಮಿಂಚು' ಹನಿಗವಿತೆಗಳ ರಚನೆ ಮಾಡಿದ್ದಾರೆ. 1997 ಡಿಸೆಂಬರ್ 8ರಂದು ನಿಧನರಾದರು.