About the Author

ಲೇಖಕಿ ಪದ್ಮಲತಾ ಮೋಹನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದವರು. ಪ್ರಸ್ತುತ ಬೆಂಗಳೂರು ನಿವಾಸಿ. ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಿಂದ ಬಿ.ಎಸ್‍ಸಿ ಪದವೀಧರರು. ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್‍ಸಿ(ಸ್ಟಾಟಿಸ್ಟಿಕ್ಸ್)ಸ್ನಾತಕೋತ್ತರ ಪದವೀಧರರು. ಬೆಂಗಳೂರು ವಿಶ್ವವಿದ್ಯಾನಿಲಯದ ಬಿ.ಎಡ್ (ಫಿಸಿಕ್ಸ್ ಮತ್ತು ಮ್ಯಾಥಮಾಟಿಕ್ಸ್) ಪದವೀಧರರು. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದ ಎ.ಎಸ್.ಸಿ ಇಂಡಿಪೆಂಡೆಂಟ್ ಪಿಯು ಕಾಲೇಜ್ ನಲ್ಲಿ ಉಪನ್ಯಾಸಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ.

 ಸಾಹಿತ್ಯ ಇವರ ಪ್ರವೃತ್ತಿ ಕಥೆ ಕವನ ಮತ್ತು ಲೇಖನಗಳನ್ನು ಬರೆಯುತ್ತಿದ್ದು, ಇವರ ಹಲವು ಕವನಗಳು ನಾಡಿನ ಹಲವು ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಹೃದಯ ಕವಿಗಳ ಜೊತೆ ಸೇರಿ ‘ಕವಿ ಕಾವ್ಯ ಸ್ನೇಹ ಬಳಗ’ ಸಂಸ್ಥೆಯನ್ನು ಹುಟ್ಟು ಹಾಕಿದ್ದು  ಪ್ರತಿ ತಿಂಗಳು ಕವಿಗೋಷ್ಠಿ ಮತ್ತು ಗಾಯನ ಕಾರ್ಯಕ್ರಮ ನಡೆಸುತ್ತಿದ್ದಾರೆ. 

ಕೃತಿಗಳು:  ಪ್ರೀತಿಯೆಂಬ ಚುಂಬಕ ಇವರ ಮೊದಲ ಕಥಾಸಂಕಲನ. ‘ಒಂದು ಸತ್ಯ, ನೂರು ಮಿಥ್ಯ’ ಹಾಗೂ ‘ಪ್ರೇಮದೋಣಿ’ (ಕಾದಂಬರಿ)

 

ಪದ್ಮಲತಾ ಮೋಹನ್