About the Author

ಸೋಸಲೆ ಶ್ರೀನಿವಾಸಾಚಾರ್ ಮೈಸೂರು ಜಿಲ್ಲೆಯ ಸೋಸಲೆ ಹೋಬಳಿಯಲ್ಲಿ ಆಗಸ್ಟ್ 8, 1919ರಲ್ಲಿ ಇವರ ಜನನ. ಪ್ರಾಥಮಿಕ ವಿದ್ಯಾಭ್ಯಾಸ ಹಳ್ಳಿಯಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1941ನೇ ವರ್ಷದ M.A. ಪದವೀಧರರು. 1943 B.T. ಪದವೀಧರರು. 1944ರಲ್ಲಿ ದೆಹಲಿಯಲ್ಲಿ ಕೇಂದ್ರೀಯ ಪುರಾತತ್ವ ಶಾಲೆಯಲ್ಲಿ ತರಬೇತಿ ಪಡೆದು ಭಾರತ ಸರ್ಕಾರದ ಪುರಾತತ್ವ ಇಲಾಖೆಯ ನಿರ್ದೆಶಕ ಡಾ. ಮಾರ್ಟಮರ್ ವೀಲರ್‌ರವರ ನೇತೃತ್ವದಲ್ಲಿ ಪಾಂಡಿಚೆರಿ ಪಕ್ಕದಲ್ಲಿರುವ ರೋಮನ್ ಕಾಲದ ಅರಿಕಮೇಡು, ಕರ್ನಾಟಕದ ಬಹ್ಮಗಿರಿ ಮತ್ತು ಚಂದ್ರವಳ್ಳಿಗಳಲ್ಲಿ ನಡೆದ ಭೂಶೋಧನಾ ಕಾರ್ಯದಲ್ಲಿ ಅನುಭವವನ್ನು ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಸ್ವಲ್ಪ ಕಾಲ ಇತಿಹಾಸ ಮತ್ತು ಪುರಾತತ್ವಗಳ ಅಧ್ಯಾಪಕರಾಗಿದ್ದು ಮೈಸೂರು ಪುರಾತತ್ವ ಇಲಾಖೆಯಲ್ಲಿ ಡಾ|| M.H. ಕೃಷ್ಣರವರ ಸಹಾಯಕಸಹೋದ್ಯೋಗಿಯಾಗಿದ್ದು 1950ರಲ್ಲಿ ಭಾರತ ಸರ್ಕಾರದ ವಾರ್ತಾ ಮಂತ್ರಾಲಯವನ್ನು ಸೇರಿ ಅನೇಕ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ವರ್ಷಗಳ ಕಾಲ, LT.D.C. ಸಂಸ್ಥೆಯಲ್ಲೂ ಭಾರತದ ಯೋಜನಾ ಆಯೋಗದಲ್ಲೂ ಪ್ರಧಾನ ಸಂಪಾದಕ ರಾಗಿದ್ದು 1977ರ ಕೊನೆ ಯಲ್ಲಿ ನಿವೃತ್ತರಾದರು. 1980ನೇ ಇಸ್ವಿಯಿಂದ ಶ್ರೀ ರಾಜ ಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿಯ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಎಸ್‌. ಶ್ರೀನಿವಾಸಾಚಾರ್‌

(08 Aug 1919)