ಲೇಖಕ ನಂದೀಶ ಹಂಚೆ ಅವರು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರ್ಣಗೊಳಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ’ ವಿಷಯದಡಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದರು.
ಕೃತಿಗಳು: ಕೆಂಡದೊಳಗಿನ ಬೇರು(ವಿಮರ್ಶೆ), ದುಡಿ (ವಿಮರ್ಶೆ), ಅಲ್ಲಮ ಮತ್ತು ಅರಾಜಕತೆ (ವಿಮರ್ಶೆ), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ(ಮಹಾಪ್ರಬಂಧ), ಬಸವಣ್ಣ ಮತ್ತು(ಸಂಪಾದಿತ), ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ, ಬಸವಪ್ಪಶಾಸ್ತ್ರಿಗಳ ಸಮಗ್ರ ನಾಟಕ ಸಾಹಿತ್ಯ(ಸಂಪಾದಿತ), ಕುವೆಂಪು ಕಥೆಗಳ ಸಮೀಕ್ಷೆ (ವಿಮರ್ಶೆ), ಘನ-ಮನ(ಸಂಪಾದಿತ, ರಾಜೇಂದ್ರ ಶ್ರೀವಾಣಿ(ಸಂಪಾದಿತ) ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.
ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಲೇಖನ, ಕಥೆ, ಪ್ರಕಟವಾಗಿವೆ. ಸದ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.