ಕನ್ನಡದ ಸಾಹಿತ್ಯದಲ್ಲಿ ಒಲವುಳ್ಳ ನಳಿನಿ ಮೂರ್ತಿ ಅವರು 1927 ಫೆಬ್ರವರಿ 24ರಂದು ಜನಿಸಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಎಲೆಕ್ಟಿಕಲ್ ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ‘ಬಿಸಿಲು ಮಳೆ, ಬೀಸಿ ಬಂದ ಬಿರುಗಾಳಿ, ಬಂಗಾರದ ಜಿಂಕೆ, ಹೊಸಬಾಳು, ಊರ್ಮಿಳಾ, ಪ್ರತಿಜ್ಞೆ’ ಅವರ ಪ್ರಮುಖ ಕಾದಂಬರಿಗಳು. ಭಾರತ ಸರ್ಕಾರದ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆ, ಎಂ.ಟೆಕ್ ಸ್ನಾತಕ ಪದವಿ ಇಂಗ್ಲೆಂಡ್ನ ಮ್ಯಾಚೆಸ್ಟರ್ ಕಾಲೇಜಿನಲ್ಲಿ, ಕೆನಡಾದ ನೋವನ್ನೀಶಿಯೊ ಪ್ರಾಂತ್ಯದ ಪ್ರೊಫೆಶನಲ್ ಇಂಜಿನಿಯರಿಂಗ್ ಸಂಸ್ಥೆಯ ಮೊದಲ ಮಹಿಳಾ ಉದ್ಯೋಗಿ, ಎಲೆಕ್ಟ್ರಿಕ್ಸ್ನಲ್ಲಿ ಪಿಎಚ್.ಡಿ. ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. ಕರ್ನಾಟಕ ಲೇಖಕಿಯರ ಸಂಘದಲ್ಲಿ ನಳಿನಿಮೂರ್ತಿ ದತ್ತಿನಿಧಿ ಸ್ಥಾಪನೆಯಾಗಿದೆ. ‘ಗಣಕದ ಕಥೆ, ಗಣಕ ಎಂದರೇನು? ’ಎಂಬ ಮಕ್ಕಳ ಕೃತಿ ರಚಿಸಿದ್ದಾರೆ. ‘ಸಾಹಿತ್ಯ ಸಂಕೀರ್ಣ ವಿಜ್ಞಾನ’ ಅವರ ಮತ್ತೊಂದು ಕೃತಿ. ‘ಎ.ಆರ್. ಕೃಷ್ಣಶಾಸ್ತಿ ಬಹುಮಾನ, ಕೆ.ಎಸ್. ಅಯ್ಯಂಗಾರ್ ಚಿನ್ನದ ಪದಕ’ ಮುಂತದ ಬಹುಮಾನಗಳಿಗೆ ಭಾಜರಾಗಿದ್ದಾರೆ.