ಸಾಹಿತಿ ಎನ್. ನಾರಾಯಣ ಬಲ್ಲಾಳ್ ಅವರು 1937 ಫೆಬ್ರುವರಿ 7ರಂದು ಉಡುಪಿಯಲ್ಲಿ ಜನಿಸಿದರು. ಹುಟ್ಟೂರಿನ ಎಂ.ಜಿ.ಎಂ. ಕಾಲೇಜಿನಲ್ಲಿ ಓದು, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಕಾಲೇಜ್ ಯೂನಿಯನ್ ಅಧ್ಯಕ್ಷರಾಗಿದ್ದರು. ವೃತ್ತಿ ಜೀವನದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇವರು ಬರೆದ ಲೇಖನ, ಕಥೆ, ಸಂದರ್ಶನಗಳು ನಾಡಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಉಡುಪಿಯ 'ಪ್ರಕಾಶ' ವಾರಪತ್ರಿಕೆಯ ಮಕ್ಕಳಪುಟ ಹಾಗೂ ಸುದ್ದಿ ವಿಭಾಗದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಇವರ ಕಾವ್ಯನಾಮ 'ಚಕ್ರಧಾರಿ'. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಿಂದ ಹಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.