ತತ್ವಶಾಸ್ತ್ರಜ್ಞೆ, ಕವಯತ್ರಿ ಮಾತೆ ಮಹಾದೇವಿ ಅವರು 1946 ಮಾರ್ಚಿ 13 ಚಿತ್ರದುರ್ಗದಲ್ಲಿ ಜನಿಸಿದರು. ಮಾತೃವಾಣಿ (ಕವನ ಸಂಕಲನ), ಶಿವಯೋಗಿಣಿ (ಜೀವನ ಕಥೆ), ಮಾತೃಹರಕೆ (ಸಂಪಾದನೆ), ದೇವರ ಮಕ್ಕಳು (ಗದ್ಯ ಕೃತಿ), ಹೆಪ್ಪಿಟ್ಟಹಾಲು (ಕಾದಂಬರಿ), ಸತ್ಯಸಂದೇಹ-ಸಮಾಧಾನ (ಪ್ರಬಂಧಗಳು), ಕ್ರಾಂತಿಯೋಗಿ ಬಸವಣ್ಣ (ಚಿತ್ರಕಥೆ), ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಣ್ಣ (ಜನಪದ ಗೀತೆಗಳು), ತರಂಗಿಣಿ (ಕಾದಂಬರಿ). ಅವರ 'ಹೆಪ್ಪಿಟ್ಟ ಹಾಲು' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ತರಂಗಿಣಿ' ಕಾದಂಬರಿಗೆ ತಮ್ಮಣರಾವ್ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿಗಳು ಲಭಿಸಿವೆ.