ಲೇಖಕಿ ಮಂಜುಳಾ ಹಿರೇಮಠ ಮೂಲತಃ ದಾವಣಗೆರೆಯವರು. ಎಂಎಸ್ಸಿ, ಬಿಇಡಿ, ಪದವೀಧರೆ. ನಾಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿ. `ಗಾಯಗೊಂಡವರಿಗೆ'- ಇವರ ಮೊದಲ ಕವಿತಾ ಸಂಕಲನ. ಈ ಕೃತಿಗೆ 2019ನೇ ಸಾಲಿನ ಮುಂಬೈನ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲ ಸೀತಾರಾಮಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ಲಭಿಸಿದೆ. ಇವರ ಕವಿತೆ, ಪ್ರಬಂಧ ಮತ್ತು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.