About the Author

ಲೇಖಕ ಮಹೇಂದ್ರ ಕುರ್ಡಿ ಅವರು ಮೂಲತಃ: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯವರು. ತಂದೆ ಮಲ್ಲಪ್ಪ, ತಾಯಿ ಭೀಮಾಬಾಯಿ. 
ತಮ್ಮೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢ ನಂತರ ಪದವಿ ಪೂರ್ವ ಶಿಕ್ಷಣ ಪೂರೈಸಿ, ಲಿಂಗಸೂಗೂರಿನ ವಳಬಳ್ಳಾರಿಯ ಚನ್ನಬಸವೇಶ್ವರ ಪದವಿ ಕಾಲೇಜಿನಲ್ಲಿ ಪದವಿ ಹಾಗೂ ರಾಯಚೂರಿನ ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. 1999 ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಮಿಕರಾಗಿ ಸೇರಿ, ಸದ್ಯ, ಗಣಿ ತಾಂತ್ರಿಕ ವಿಭಾಗದಲ್ಲಿ ಅಪರೇಟರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2000ರಲ್ಲಿ ಹಟ್ಟಿನ ಚಿನ್ನದ ಗಣಿಯಲ್ಲಿ ಶ್ರೀ ವಿನಾಯಕ ವಿದ್ಯಾ ಸಂಸ್ಥೆ ಸ್ಥಾಪಿಸಿದ್ದಾರೆ. ಪ್ರಸ್ತುತ ಲಿಂಗಸುಗೂರು ತಾಲ್ಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು. 

 ಕೃತಿಗಳು: ಹೊನ್ನಸಿರಿ (ಕವನಸಂಕಲನ), ಮನಮಂಥನ ಸಿರಿ ಭಾಗ-1 (ಹೊನ್ನುಡಿಗಳ ಹೂರಣ), ಮನಮಂಥನ ಸಿರಿ ಭಾಗ-2, (ಧಾರ್ಮಿಕ ಹಿತ ಚಿಂತನೆಗಳು)  

ಪ್ರಶಸ್ತಿ-ಪುರಸ್ಕಾರಗಳು: ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಕರ್ನಾಟಕ ಪಾಂಡಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ, ರಾಷ್ಟ್ರೀಯ ಸಾಹಿತ್ಯ ಚೇತನ ಪ್ರಶಸ್ತಿ, 
 ಜ್ಞಾನ ವಿಭೂಷಣ ಅಂತಾರಾಷ್ಟ್ರೀಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,  ಪ್ರಜಾರತ್ನ ರಾಜ್ಯ ಪ್ರಶಸ್ತಿ, ರಾಜ ವೀರಮದಕರಿ ನಾಯಕ ಪ್ರಶಸ್ತಿ , ರಾಜ್ಯ ಬೆಳಕು ಪುಸ್ತಕ ಪ್ರಶಸ್ತಿ-( ಮಂಥನ ಸಿರಿ)

ಮಹೇಂದ್ರ ಕುರ್ಡಿ

(01 Jun 1972)