ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ ಅವರು ಆನೇಕಲ್ ತಾಲೂಕಿನ ಇಂಡ್ಲವಾಡಿಯವರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ. ಎ.(ಕನ್ನಡ) ಪದವೀಧರರು. ಕವಿತೆ, ಲೇಖನ ಬರೆಯುವ ಹವ್ಯಾಸಿ. ‘ ದೀವಟಿಗೆ ಬೆಂಗಳೂರು’ ಎಂಬ ಸಾಹಿತ್ಯಕ ಗುಂಪಿನ ಸಂಸ್ಥಾಪಕ ಸದಸ್ಯರು ಹಾಗೂ ದೀವಟಿಗೆ ಕೈ ಬರಹ ಪತ್ರಿಕೆಯ ಸಂಪಾದಕರು. ‘ಪ್ರೇಮ ವಿರಾಗಿ ನಡುಗತ್ತಲ ಕವಿತೆ’ ಇವರ ಮೊದಲ ಕವನ ಸಂಕಲನ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಕರಾಗಿದ್ದಾರೆ.