ಕವಿ ಅಶಿರುದ್ದೀನ್ ಮಂಜವಾಡಿ ಅವರು 1989 ಏಪ್ರಿಲ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಸಾರ್ತಬೈಲ್ ಎಂಬ ಊರಿನಲ್ಲಿ ಜನಿಸಿದರು. ಮಂಜನಾಡಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕಾಸರಗೋಡಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಪ್ರಸ್ತುತ ಖಾಸಗಿ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂಕ್ ಡಬ್ಬಿ,ಕಾಂ ವೆಬ್ಸೈಟ್ನ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕವಿತೆಗಳು ಹಲವು ಪತ್ರಿಕಗಳಲ್ಲಿ ಪ್ರಕಟವಾಗಿವೆ. ಮುಸ್ಲಿಂ ಲೇಖಕರ ಸಂಘ, ಕೋಮು ಸೌಹಾರ್ದ ವೇದಿಕೆ, ಮೇಲ್ತನೆ ಬ್ಯಾರಿ ಸಂಘ ಇನ್ನೀತರ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.