ಲೇಖಕಿ ಲಕ್ಷ್ಮೀ ವಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರದವರು. ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಎಂ. ಎ, ಬಿ.ಎಡ್ ಪದವೀಧರರು. ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಛಂದಸ್ಸು ವಿಶೇಷ ಆಸಕ್ತರು.
ಕೃತಿಗಳು ; ಹೊಸ ಬರಹಗಾರರ ಕೈಪಿಡಿ
ಪ್ರಶಸ್ತಿಗಳು ; ಸುವರ್ಣ ಕನ್ನಡ ರತ್ನ ಪ್ರಶಸ್ತಿ (ಕೀರ್ತಿ ಪ್ರಕಾಶನ), ಸಾಹಿತ್ಯ ದೀವಿಗೆ ಪ್ರಶಸ್ತಿ ಹಾಗೂ ಕಾವ್ಯ ಕಣಜ ಪ್ರಶಸ್ತಿ ಲಭಿಸಿದೆ.