ಲಕ್ಷ್ಮೀನಾರಾಯಣ ವಿ. ಅವರು ವೆಂಕಟಯ್ಯ ಮತ್ತು ಜಯಮ್ಮ ಎಂ.ಎನ್. ಅವರ ಮಗನಾಗಿ ಹುಲಿಯೂರುದುರ್ಗ ಹೋಬಳಿಯ ಶೃಂಗಾರಸಾಗರದಲ್ಲಿ ಜನಿಸಿದರು. ಹುಲಿಯೂರುದುರ್ಗದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ, ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿ.ಯು.ಸಿ. ಯನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಕನ್ನಡ ಎಂ.ಎ. ಮಾಡಿ ನಂತರ ಕೆ.ಎಲ್.ಇ. ವಿದ್ಯಾಸಂಸ್ಥೆಯಲ್ಲಿ ಬಿ.ಇಡಿ. ಮಾಡಿದ್ದಾರೆ. ಬೆಂಗಳೂರಿನ ಇಂಡೋ ಏಷಿಯನ್ ಅಕಾಡೆಮಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಪ್ರಾರಂಭಿಸಿ, ಪ್ರಸ್ತುತ ಅರಿಹಂತ್ ಪಿಯು ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯಾಭಿಮಾನಿಯಾಗಿರುವ ಅವರು ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ಚಿತ್ರಕಲೆಯಲ್ಲಿ ಪ್ರಾವೀಣ್ಯತೆಯ ಜೊತೆಗೆ, ಸೋಪಿನಲ್ಲಿ ಕುಸುರಿ ಕೆಲಸ ಮಾಡುವುದು, ಕವನಗಳನ್ನು ರಚಿಸುವುದು ಇವರ ಹವ್ಯಾಸ, ಅನೇಕ ಕವಿ ಗೋಷ್ಠಿ, ಸಮ್ಮೇಳನಗಳಲ್ಲಿ ಭಾಗವಹಿಸಿ, ಬಹುಮಾನ ಪ್ರಶಸ್ತಿಗಳನ್ನು ಪಡೆದಿದ್ದಾರೆ.