ಎಲ್.ಜಿ. ಸುಮಿತ್ರ ಅವರು 1934 ಮಾರ್ಚ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಗುಂಡಪ್ಪ, ತಾಯಿ ಶಾರದಮ್ಮ. ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಕಾವ್ಯಕಾವೇರಿ, ಸ್ಪರ್ಶರೇಖೆ, ಕರ್ನಾಟಕ ವೃತ್ತಿಗಾಯಕರು, ಭಾರತದ ಸಂಗೀತ ವಾದ್ಯಗಳು ಇವರ ಪ್ರಮುಖ ಕೃತಿಗಳು. ಏಷ್ಯನ್ ಬ್ರಾಡ್ಕಾಸ್ಟಿಂಗ್ ಯೂನಿಯನ್ನ ಹೊಸ ಬಂಕ ಫೌಂಡೇಶನ್ ಪ್ರಶಸ್ತಿ. ಕರ್ನಾಟಕ ಸರ್ಕಾರದ ಬಹುಮಾನ 'ಕಾವ್ಯ ಕಾವೇರಿ'ಗೆ ದೊರೆತಿದೆ. ಅಲ್ಲದೆ ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದ ತಜ್ಞೆ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿಗಳು ಇವರನ್ನರಿಸಿವೆ.