ಬರಹಗಾರರಾದ ಕೆ.ಎಸ್. ಪಾರ್ಥಸಾರಥಿಯವರು ನಿವೃತ್ತ ಟೆಲಿಕಾಂ ಇಂಜಿನಿಯರ್. ಸಮಕಾಲೀನ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಶ್ಲೇಷಣೆಗಳನ್ನು ಇವರು ಹೊಸತು ಪತ್ರಿಕೆಗೆ ಬರೆದಿದ್ದಾರೆ. ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮ: ಒಂದು ಚಾರಿತ್ರಿಕ ಹಿನ್ನೋಟ ಕೃತಿಯನ್ನು ಇವರು ರಚಿಸಿದ್ದಾರೆ. ಪ್ರೊ. ಕೆ.ಎನ್. ಪಣಿಕ್ಕರ್ ಅವರು ಬರೆದ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ವಿ. ಕಕ್ಕಿಲ್ಲಾಯರ ಸಂಭಾವನಾ ಗ್ರಂಥ ‘ನಿರಂತರ’ ಇವರು ಸಂಪಾದಿಸಿದ ಕೃತಿಯಾಗಿದೆ.