ಸಾಹಿತಿ ಕೆ.ರಮಾನಂದ ಬನಾರಿ ಅವರು ಜನಿಸಿದ್ದು 1940 ಜೂನ್ 4ರಂದು ಕಾಸರಗೋಡಿನ ಕೀರಿಕ್ಕಾಡಿನಲ್ಲಿ ಜನಿಸಿದರು. ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವೀಧರರು. ವೃತ್ತಿಯೊಂದಿಗೆ ಕವನ, ಚುಟುಕ, ಶಿಶುಗೀತೆ, ಪ್ರಬಂಧ ಇತ್ಯಾದಿ ಇವರ ಬರೆಹಗಳು ಕಸ್ತೂರಿ, ಸುಧಾ, ಉದಯವಾಣಿ, ಪ್ರಜಾವಾಣಿ, ಹೊಸದಿಗಂತ, ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇವರ ಪ್ರಮುಖ ಕೃತಿಗಳೆಂದರೆ ಎಳೆಯರ ಗೆಳೆಯ, ಕೊಳಲು, ತೊಟ್ಟಿಲು, ಕವಿತೆಗಳೇ ಬನ್ನಿ, ಜೀವವೃಕ್ಷ, ಗುಟುಕುಗಳು, ಬಿಂದುಗಳು, ಸಾಧನೆ. ಯಕ್ಷಗಾನ ಪ್ರಸಂಗಗಳು ಇತ್ಯಾದಿ. ಇವರಿಗೆ ಗೋವಿಂದ ಪೈ ಕಲಾ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾ ಡಾ. ಎಸ್.ಪಿ. ಶಂಕರ್ ಪ್ರತಿಷ್ಠಾನದ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.