ಕೆ. ಜಿ. ನಾಗರಾಜಪ್ಪ ಅವರು ಜನಿಸಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಲ್ಲೂರಿನಲ್ಲಿ 1934ರ ಜನೆವರಿ 9ರಂದು. ಕಲ್ಲೂರು, ಕಡಬ, ತುಮಕೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ, ಸಾಗರ, ಮೈಸೂರು, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆ. ದೊಡ್ಡಸಂಕಣ್ಣ (ಐತಿಹಾಸಿಕ ಕಾದಂಬರಿ-1962), ದೇವಾಂಗ ಸಂಸ್ಕೃತಿ (ಅಧ್ಯಯನ-1983), ಮರುಚಿಂತನೆ (ವಿಮರ್ಶೆ-1985), ಇಕ್ಕಟ್ಟು ಬಿಕ್ಕಟ್ಟು (ವಿಮರ್ಶೆ-1998) ಪ್ರಕಟಿತ ಕೃತಿಗಳು. ಅನ್ವೇಷಕ (1998) ಅಭಿನಂದನಾ ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಬೆಂಗಳೂರಿನಲ್ಲಿ ತಮ್ಮ ಪತ್ನಿಯೊಂದಿಗೆ ನೆಲೆಸಿದ್ದಾರೆ. ವೈಚಾರಿಕ ಮತ್ತು ವಿಶ್ಲೇಷಣಾತ್ಮಕವಾಗಿ ಸಂಸ್ಕೃತಿ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಶ್ರೇಣಿ -ಯಜಮಾನಿಕೆ ಕೃತಿಗೆ 2018 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.