ಲೇಖಕ ಇಬ್ರಾಹೀಮ್ ಸಈದ್ ಅವರು ಬಿ.ಕಾಂ ಪದವೀಧರರು. 1945 ಮೇ 20 ರಂದು ಜನಿಸಿದರು. ತಂದೆ ಕೆ. ಸಈದ್, ತಾಯಿ ಕೆ. ಫಾತಿಮಾ. ಮಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಕ್ಕೆ 3ನೇ ರ್ಯಾಂಕ್ ನೊಂದಿಗೆ (ಹಿಂದಿ )ಸ್ನಾತಕೋತ್ತರ ಪದವೀಧರರು. 1973 ಏಪ್ರಿಲ್ 23 ರಂದು ಆರಂಭವಾದ ಸನ್ಮಾರ್ಗ ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ ತಮ್ಮ ಜೀವಿತಾವಧಿಯವರೆಗೂ ಮುಂದುವರಿದಿದ್ದರು. ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್, ಮಲಯಾಳಂ, ಬ್ಯಾರಿ, ಅರಬಿ ಭಾಷೆಗಳನ್ನು ತಿಳಿದಿದ್ದು, ಕನ್ನಡ, ಬ್ಯಾರಿ, ಉರ್ದು ಭಾಷೆಯಲ್ಲಿ ನಿರರ್ಗಳವಾಗಿ ಉಪನ್ಯಾಸಗಳನ್ನು ನೀಡುತ್ತಿದ್ದರು.
ಕೃತಿಗಳು: ಪ್ರವಾದಿ ಜೀವನ ಮತ್ತು ಸಂದೇಶ, ತಪ್ಪು ಕಲ್ಪನೆಗಳು, ಲೋಕಾನುಗ್ರಹಿ, ಸಹಸ್ರ ಹದೀಸ್ ಗಳು, ನೂರೆಂಟು ಚಿಂತನೆಗಳು, ಜೀವನದ ಶಿಷ್ಟಾಚಾರಗಳು, ಮಹಿಳೆ ಮತ್ತು ಸಮಾಜ, ಕೋಮು ಸೌಹಾರ್ದ ಮತ್ತು ಚಾತತ್ಯ್ರ ನಿರ್ಮಾಣ, ಬಡ್ಡಿ, ಭಾರತದ ಭವಿಷ್ಯ ಮತ್ತು ಮುಸ್ಲಿಮರು, ಸರ್ವ ಧರ್ಮ ಸಮಭಾವ ಸೇರಿದಂತೆ 23ಕ್ಕೂ ಅಧಿಕ ಕೃತಿಗಳನ್ನು ಹಾಗೂ 25 ಅನುವಾದಿತ ಕೃತಿಗಳಿವೆ. ಇವರ ‘ತಪ್ಪು ಕಲ್ಪನೆಗಳು’ ಕೃತಿಯು 10 ಭಾಷೆಗಳಲ್ಲಿ ಅನುವಾದಿತಗೊಂಡಿದೆ.
ಪ್ರಶಸ್ತಿ-ಗೌರವಗಳು: ಶಾಂತಿ ಪ್ರಕಾಶನ ಸಂಸ್ಥೆಯ ಅಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಅಧ್ಯಕ್ಷರಾಗಿದ್ದರು. ಮುಸ್ಲಿಮ್ ಲೇಖಕರ ಸಂಘದ ಪ್ರಶಸ್ತಿ ಹಾಗೂ ವರ್ಷದ ಹಿರಿಯ ಸಾಹಿತಿ ಪ್ರಶಸ್ತಿ ಲಭಿಸಿವೆ.