ಲೇಖಕ ಹೂಲಿ ಶೇಖರ್ ಅವರು ಕತೆಗಾರ, ಕಾದಂಬರಿಕಾರ, ನಾಟಕಕಾರರು. 50 ವರ್ಷ ಕಾಲ ಕನ್ನಡ ರಂಗಭೂಮಿಯಲ್ಲಿ ನಟ, ರಂಗ ನಿರ್ದೇಶಕರಾಗಿಯೂ ಕೊಡುಗೆ ನೀಡಿದ್ದಾರೆ. ಸುಮಾರು 40ಕ್ಕೂ ಮಿಕ್ಕಿ ನಾಟಕಗಳನ್ನು ಬರೆದಿದ್ದಾರೆ. ಕತೆ-ಚಿತ್ರಕತೆ-ಸಂಭಾಷಣೆ-ನಟರಾಗಿ, ಸಂಘಟನೆಗಾರರಾಗಿ ಕಿರುತೆರೆಯಲ್ಲಿ ಈವರೆಗೆ ಸುಮಾರು 20 ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮೂಡಲ ಮನೆ, ಆ ಊರು ಈ ಊರು, ಮಹಾನವಮಿ, ಸೌಭಾಗ್ಯವತಿ, ಗಂಗಾ ಮುಂತಾದ ಧಾರಾವಾಹಿಗಳಲ್ಲಿಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಕಿರುತೆರೆಯಲ್ಲಿ ತಂದವರು. ದೇಶ-ವಿದೇಶದಲ್ಲೂಸಂಚರಿಸಿ ಜನಪದೀಯ ಹಾಗೂ ರಂಗ ಚಟುವಟಿಕೆಗಳನ್ನು ಅಧ್ಗಯನ ಮಾಡಿದ್ದಾರೆ. ಇವರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ.
ಕೃತಿಗಳು: ’ಕರಿಯು ಕನ್ನಡಿಯೊಳಗೆ’ ನಾಟಕ ಕೃತಿಗೆ ರಾಜ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ.