ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರು ಕತೆಗಾರ. ಸಾಹಿತ್ಯ, ಶಿಕ್ಷಣ, ಸಂಘಟನೆಗಳಲ್ಲಿ ಆಸಕ್ತಿ ಹೊಂದಿರುವ ಹೊನ್ನಶೆಟ್ಟಹಳ್ಳಿ ಗಿರಿರಾಜ್ ಅವರದು ವೈವಿಧ್ಯಮಯ ಸಾಧನೆ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಉತ್ತಮ ಶಿಕ್ಷಣ ತಜ್ಞರೆಂಬ ಹೆಸರು ಪಡೆದಿದ್ದಾರೆ.
ಕಲೆ, ಸಾಹಿತ್ಯ, ನಾಟಕ, ನಟನೆ, ನಿರ್ದೇಶನ, ಸಂಘಟನೆ, ಸೇವೆ, ತೋಟಗಾರಿಕಗಳಲ್ಲಿ ಆಸಕ್ತರಾಗಿರುವ ಅವರು ನಿಸರ್ಗ, ಚಾಳೀಸು, ಆಯ್ದ ಕಥೆಗಳು ಮುಂತಾದ ಕತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ನನ್ನ ನಿನ್ನೊಳಗೆ, ನನ್ನ ಪ್ರೀತಿಯ ಹುಡುಗಿ, ಪ್ರಣಯ ಗೀತೆಗಳು ಮುಂತಾದವು ಇವರ ಕವನ ಸಂಕಲನಗಳು. ಸೌರಭ, ಮೂವರು ಮಿತ್ರರು, ನೆಂಬ ಪಟೇಲನೂ ಬಂಡ ಪ್ರಸಂಗವೂ, ಮಹಾಚೈತ್ರವೆ ನಾಟಕ ಕೃತಿಗಳು. ಹಿರಿಹಳ್ಳಿಯ ಹತ್ತು ಸಮಸ್ತರು, ಹೊಸಗಾವಿ-ನನ್ನೂರು ನನ್ನ ಜನ, ಚನ್ನರಾಯ ಪಟ್ಟಣದ ಪರಿಸರದ ನಾಲ್ಕು ಗ್ರಾಮದೇವತೆಗಳು-ಇವರ ಸಂಶೋಧನಾ ಕೃತಿಗಳು.
ಅವರ ’ಪ್ರಕೃತಿ ನೆರಳಲ್ಲಿ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ನೀಡುವ ಲಭಿಸಿದೆ. ’ತೀರ್ಪು ನಿಮ್ದೆ’ ಎಂಬುದು ಅವರ ಮತ್ತೊಂದು ಕೃತಿ.