ಕಲಾವಿದ, ಲೇಖಕ ಹರ್ಷವರ್ಧನ ಹೆಗಡೆ ನಿಟ್ಟೂರು ಅವರು ಮಲೆನಾಡಿನ ಕೊಡಚಾದ್ರಿಯ ತಪ್ಪಲಿನ ನಿಟ್ಟೂರಿನಲ್ಲಿ 1986 ಜೂನ್ 20ರಂದು ಜನಿಸಿದರು. ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ನಿಟ್ಟೂರು ಅನಂತ ಹೆಗಡೆ, ತಾಯಿ ಜಾಹ್ನವಿ. ಪ್ರಸ್ತುತ ಕೃಷಿಕರಾಗಿದ್ದಾರೆ. ‘ಅಂಬೆಯ ಅಂತರಂಗ’ ಅವರ ಕಥಾಸಂಕಲನ ಮತ್ತು ‘ಭಾವಲೇಖಾ’ ಕಥಾಕವನ ಸಂಕಲನ. ಅವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.