ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದಾರೆ.
ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016).
ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ನೆನದದ್ದು ಹೆಚ್ಚಾಗಿ ಸಂಕಲನಕ್ಕೆ ಡಿವಿಜಿ ಬಹುಮಾನ, ಕಲಾವಿದನ ಕೊಲೆ ಸಂಕಲನಕ್ಕೆ ರಾಜ್ಯ ಸಾಹಿತ್ಯ ಪರಿಷತ್ ದತ್ತಿ ನಿಧಿ ಪ್ರಶಸ್ತಿ, ಹೆಸರು ಕಥೆಗೆ 2016ರ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಹಾಗೂ ಕಲೆ ಕಥೆಗಾಗಿ ಗುಲ್ಬರ್ಗ ವಿಶ್ವವಿದ್ಯಾಲಯ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಉತ್ತಮ ಕಥಾ ಪ್ರಶಸ್ತಿ ಲಭಿಸಿವೆ. ಅಲ್ಲದೆ, ‘ಪಿಲಿಯನ್ ರೈಡರ್ ’ ಎಂಬುದು ಇವರ 4ನೇ ಕವನ ಸಂಕಲನ.