ಕವಯತ್ರಿ ಗೌರಿ ಪಾಟೀಲರು ಕಲಬುರಗಿ ನಿವಾಸಿಗಳು. ಅನುಭಾವ ಪರಂಪರೆಯ ಮೂಲಕ ಜೀವ ಪರವಾದ ಕಾವ್ಯವನ್ನು ರಚಿಸುತ್ತಿರುವ ಗೌರಿ ಪಾಟೀಲರನ್ನು ಕಲಬುರಗಿ ಜಿಲ್ಲೆಯ ಆಳಂದದ ಸಮತಾ ಲೋಕ ಶಿಕ್ಷಣ ಸಮಿತಿ ಯು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ಮಹಿಳಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು: "ಸೆರಗ ನೂಲಿನ ಕಾವು" (ಕವನ ಸಂಕಲನ) ಈ ಕೃತಿಗೆ ಕನ್ನಡನಾಡು ಪ್ರಕಾಶನದ ಕಲ್ಯಾಣ ಕರ್ನಾಟಕ ಪ್ರದೇಶದ ಸಾಹಿತಿಗಳ ಶ್ರೇಷ್ಠ ಸಾಹಿತ್ಯ ಕೃತಿಯೆಂದು, 2018 ಸಾಲಿನ ಪ್ರೊ.ಎಸ್.ಜಿ.ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ರಾಜ್ಯ ಮಟ್ಟದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಈ ಕೃತಿ ಆಯ್ಕೆಗೊಂಡಿದೆ.