ಗೌತಮ ಎ. ಸಕ್ಕರಕಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದವರು. ಬಿ.ಇಡಿ. ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಜಾನಪದ ವಿದ್ವಾಂಸ ಡಾ.ಬಸವರಾಜ ಪೋಲಿಸಪಾಟಿಲರ ಬದುಕು ಬರಹ ಕುರಿತು ಪಿಎಚ್ ಡಿಗಾಗಿ ಸಂಶೋಧನೆ, ಹಿಂದುಳಿದ ದಲಿತ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಹೋರಾಟಗಾರರು. ಅವರ ಮೊದಲ ’ಕಾಡುತ್ತಿವೆ ಕನಸುಗಳು’ಕವನಗಳ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯಕ್ಕೆ ಆಯ್ಕೆಯಾಗಿದೆ.