ಕವಿ ಗಂಗಾಧರ ಚಿತ್ತಾಲ ಅವರು ಜನಿಸಿದ್ದು1923 ನವೆಂಬರ್ 12ರಂದು. ಇವರ ಹುಟ್ಟೂರು ಗೋಕರ್ಣ ಸಮೀಪದ ಹನೇನಳ್ಳಿ. ತಂದೆ ವಿಠೋಬಾ ಪುಂಡರೀಕ, ತಾಯಿ ರುಕ್ಕಿಣೀದೇವಿ ಲಂಡನ್, ಅಮೆರಿಕ ಮುಂತಾದ ದೇಶಗಳ ಪ್ರವಾಸ ಮಾಡಿದ್ದ ಅನುಭವಗಳು ಇವರು ಬರೆದಿರುವ ಪ್ರವಾಸ ಕಥನಗಳಲ್ಲಿ ಕಂಡುಬರುತ್ತವೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕಾಲದ ಕರೆ, ಮನುಕುಲದ ಹಾಡು, ಸಂಪರ್ಕ, ಹರಿವನೀರಿದು ಇತ್ಯಾದಿ. ಕನ್ನಡ ಪುಸ್ತಕ ಪ್ರಾಧಿಕಾರ ಇವರ ಕವಿತೆಗಳ ಸಮಗ್ರ ಕವಿತೆ ಸಂಕಲನ ಪ್ರಕಟಿಸಿದೆ. 1987 ಜನವರಿ 28ರಂದು ಮರಣ ಹೊಂದಿದರು.