ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪರವರು ಕಡೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ಹಾಲಪ್ಪ ಮತ್ತು ತಾಯಮ್ಮ ಇವರ ಪುತ್ರನಾಗಿ ಜನಿಸಿರುತ್ತಾರೆ. ಪ್ರಾರ್ಥಮಿಕ ವಿದ್ಯಾಭ್ಯಾಸ ಚನ್ನಾಪುರದಲ್ಲಿ ಮತ್ತು ಪ್ರೌಢಶಿಕ್ಷಣ ಕಡೂರಿನಲ್ಲಿ ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗದಲ್ಲಿ ಬಿಎಸ್ಸಿ ಪದವಿ, ಜ್ಞಾನ ಸಹ್ಯಾದಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಮತ್ತು ಸಂಶೋಧನೆಯನ್ನು ಮಾಡಿ ಪಿಎಚ್.ಡಿ ಗಳಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಸಾಬಿಕ್ ಇನ್ನೋವೆಟಿವ್ ಪ್ಲಾಸ್ಟಿಕ್, ಬೆಂಗಳೂರು ಮತ್ತು ದಕ್ಷಿಣ ಕೊರಿಯಾದ ವಿದ್ಯಾಲಯದಲ್ಲಿ ಮಾಡಿರುತ್ತಾರೆ. ಪ್ರಸ್ತುತ ಕಡೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಸಾಹಿತ್ಯ ಕ್ಷೇತ್ರದಲ್ಲಿ 2016 ನೇ ಇಸವಿಯಿಂದ ಕವನಗಳು, ಕಾದಂಬರಿ, ಕಥಾ ಸಂಕಲನ, ವಚನ ಸಂಕಲನ ಮತ್ತು ವ್ಯಕ್ತಿತ್ವ ವಿಕಾಸನಕ್ಕೆ ಸಂಬಂಧಿಸಿದ ಪುಸ್ತಕ ಬರೆಯುವುದರಲ್ಲಿ ತಮ್ಮ ಬಿಡುವಿನ ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ. ಇವರ ಕೃತಿಗಳು ನೂರಾರು ಕನಸು ಚೂರಾದ ಮನಸು, ಬದುಕಿನ ಬಣ್ಣ, ಭಾವನೆಗಳ ಚಿತ್ತಾರ