.ಸಿ. ವೆಂಕಟೇಶ ಅವರು ಎಂ.ಎ. ಹಾಗೂ ಎಂ.ಫಿಲ್ ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರು. ದ್ರಾವಿಡ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ತೌಲನಿಕ ಅಧ್ಯಯನ ಮತ್ತು ಅನುವಾದ ಕ್ಷೇತ್ರದಲ್ಲಿ ಆಸಕ್ತರು.
ಕೃತಿಗಳು: ಲಂಕೇಶರ ಕಥನ ಸಾಹಿತ್ಯದಲ್ಲಿ ಗ್ರಾಮಸಮಾಜ, ತೆಲುಗು ದಾಕ್ಷಿಣಾತ್ಯ ಸಾಹಿತ್ಯ , ದ್ರಾವಿಡ ನಿಘಂಟು (ಇತರರೊಂದಿಗೆ). ಮತ್ತು ವೇಮನ ಮತ್ತು ಇತರ ಅನುಭಾವಿಗಳು, ದ್ರಾವಿಡ ಅಧ್ಯಯನ, ಆಂಧ್ರದ ವಿಶಿಷ್ಟ ಕಲಾಪ್ರಕಾರ: ಕೂಚಿಪೂಡಿ, ದ್ರಾವಿಡ ಅಧ್ಯಯನ, ಸಂಪುಟ, ಆಂಧ್ರರ ಪ್ರಾಚೀನತೆ, ದ್ರಾವಿಡ ಅಧ್ಯಯನ ಹೀಗೆ ವಿವಿಧ ವಿಷಯಗಳಡಿ ಲೇಖನಗಳನ್ನು ಬರೆದಿದ್ದಾರೆ.