ಅಂಕಣಗಾರ್ತಿ, ಪತ್ರಕರ್ತೆ, ಸ್ತ್ರೀ ಸಂವೇದನೆಯಂತಹ ಹಲವು ಆಯಾಮಗಳ ಪ್ರಮುಖ ಬರಹಗಾರ್ತಿ ಮಂಜುಳಾ ಸಿ.ಜಿ. 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. 1958 ಡಿಸೆಂಬರ್ 17 ರಂದು ಮೈಸೂರಿನ ನಂಜನಗೂಡಿನಲ್ಲಿ ಜನಿಸಿದರು. ’ಪ್ರಜ್ಞಾ (ಹೆಣ್ಣುಮಗು ಮತ್ತು ಸ್ತ್ರೀ ಸಂವೇದನೆ ಕುರಿತ ಲೇಖನಗಳು). ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದ ಅವರು ’ಕಡೆಗೋಲು’ ಎಂಬ ಅಂಕಣವನ್ನು ಬರೆಯುತ್ತಿದ್ದರು. “ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡೆಸ್ಕ ಪತ್ರಿಕೋದ್ಯಮ UNFPA ಲಾಡ್ಲಿ ಮೀಡಿಯಾ ಪ್ರಶಸ್ತಿ, ಕೆಪಿಸಿಸಿಯ ಇಂದಿರಾ ಗಾಂಧಿ ಸೇವಾ ಪ್ರಶಸ್ತಿ”ಗಳು ಲಭಿಸಿವೆ. ಮಹಿಳೆಯರ ಆಸ್ತಿ ಹಕ್ಕು ಕುರಿತಾದ ಲೇಖನವು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.