ಕವಿ, ಲೇಖಕ ಬುಸ್ಸಣ್ಣ ವಿ ಯಾದವ್ ಅವರು ಮೂಲತಃ ಯಾದಗಿರಿಯ ಗುರುಮಿಠಕಲ್ ತಾಲೂಕಿನ ಬದ್ದೆಪಲ್ಲಿಯವರು. ಕಲಿ ಕವಿ ಅವರ ಕಾವ್ಯನಾಮ. ಬಿ. ಎ ವಿದ್ಯಾರ್ಥಿ. ಅವರ ಕವನ ಮತ್ತು ಬರಹಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2020ರಲ್ಲಿ ಯಾದಗಿರಿಯ ಜಿಲ್ಲಾ ಘಟಕ ಕರುನಾಡ ಹಣತೆ ಬಳಗದ ಜಿಲ್ಲಾಧ್ಯಕ್ಷರಾಗಿದ್ದರು. 2021ರಲ್ಲಿ ಯಾದಗಿರಿ ಜಿಲ್ಲಾ ಘಟಕದ ಕರುನಾಡು ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲಾಧ್ಯಕ್ಷರಾಗಿದ್ದಾರೆ.