ಡಾ. ಬಸವರಾಜ ಅಣ್ಣಪ್ಪ ಅವರು ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಡಹಳ್ಳಿ ಗ್ರಾಮದವರು. ಎಂ.ಎ, ಎ.ಎಡ್, ಎಂ.ಫಿಲ್ ಹಾಗೂ ಪಿಎಚ್ ಡಿ (ವಿಷಯ: ಗುಲಬರ್ಗಾ ಜಿಲ್ಲೆಯ ಪ್ರವಾಸಿ ತಾಣಗಳು) ಪದವೀಧರರು.
ಸುಲೇಪೇಟೆಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ತಮ್ಮ ಸಂಶೋಧನಾ ಮಹಾಪ್ರಬಂಧವನ್ನು(ವಿಷಯ: ಗುಲಬರ್ಗಾ ಜಿಲ್ಲೆಯ ಪ್ರವಾಸಿ ತಾಣಗಳು) ಪ್ರಕಟಿಸಿದ್ದಾರೆ.