ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಬಾಸೂರು ಬಿ.ಎಸ್. ವೆಂಕಟೇಶ ರಾವ್ ಅವರ ಹುಟ್ಟೂರು. ಆದರೆ, ವಿದ್ಯಾಭ್ಯಾಸ ಮತ್ತು ಬಂದು ನೆಲೆಸಿದ್ದು ತರೀಕೆರೆಯಲ್ಲಿ. ನಂತರ ಶಿವಮೊಗ್ಗ, ಬೆಂಗಳೂರಿನಲ್ಲಿ ಕಾಲೇಜು, ರೈಲ್ವೆಯಲ್ಲಿ ಉದ್ಯೋಗ, ಬೆಂಗಳೂರಿನಲ್ಲಿ 33 ವರ್ಷಗಳ ಸೇವೆ ಮಾಡಿ ನಿವೃತ್ತಿ. ಓದುವಾಗಿನಿಂದಲೂ, ನಾಟಕದ ಗೀಳು, ನಂತರ ಆಕಾಶವಾಣಿ, ದೂರದರ್ಶನದಲ್ಲಿ ನಡೆಸಿದ ಅನೇಕ ಕಾರ್ಯಕ್ರಮಗಳು. ಅನೇಕ ವರ್ಷ ರೈಲ್ವೆಯಲ್ಲಿ ಕನ್ನಡ ಮತ್ತು ಹಿಂದೀ ನಾಟಕಗಳ ಪ್ರದರ್ಶನ, ಬಿ.ಎಸ್ಸಿ. ಮಾಡಿ ಕೆಲಸಕ್ಕೆ ಸೇರಿ, ನಂತರ ಬಿ.ಕಾಂ, ಎಂ.ಎ, ಪಿ.ಜಿ. ಡಿಪ್ಲೋಮಗಳ ವಿದ್ಯಾಸಾಧನೆ. ನಿವೃತ್ತಿಯ ನಂತರ, ಸುಚಿತ್ರ ಫಿಲಂ ಸೊಸೈಟಿ ಸದಸ್ಯತ್ವ, ಸಿನಿಮಾ ಬಗ್ಗೆ ಅಧ್ಯಯನ.
ನಂತರ, ಕಿರುಚಿತ್ರಗಳ ನಿರ್ಮಾಣ, ನಟನೆ, ನಿರ್ದೆಶನ. ಅಂಗಾಂಗ ದಾನದ ಮಹತ್ವ ಸಾರುವ, ಶಿಬಿ ಕಿರುಚಿತ್ರ, ಚಂದನದ ರೆಡಿ... ರೋಲ್... ಆಕ್ಷನ್, ಕಿರು ಚಿತ್ರಸರಣಿಯಲ್ಲಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿವೃತ್ತ ನೌಕರರ ಕಾರ್ಯಕ್ರಮ ಗಳಲ್ಲಿ ಪ್ರದರ್ಶನಗೊಂಡು ಅಮೇರಿಕಾದ ಕನ್ನಡ ಸಂಘದಲ್ಲಿ ಸಹ ಪ್ರದರ್ಶನವಾಗಿದೆ. ಇವರ ನಿರ್ದೆಶನದ ಮತ್ತೊಂದು ಚಿತ್ರ “ಸಂಚಾರ ಲಹರಿ' ಬ್ರಹ್ಮಾವರದ, ರೋಟರಿ ಕಿರುಚಿತ್ರೋತ್ಸವದಲ್ಲಿ Best Photography ಪ್ರಶಸ್ತಿ ಪಡೆದಿದೆ. 'ಸಿನಿ ಮಾಯೆ' ಇವರ ಚೊಚ್ಚಲ ಕೃತಿಯಾಗಿದ್ದು, ಸ್ನೇಹ ಬುಕ್ ಹೌಸ್‌ನಿಂದ ಪ್ರಕಟ ವಾಗಿದೆ.