ಅನಂತನಾಗ್, ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಸೆಪ್ಟೆಂಬರ್ 4, 1948ರಲ್ಲಿ ನಾಗರಕಟ್ಟೆಯಲ್ಲಿ ಜನಿಸಿದ ಅವರು, ಪ್ರಾರಂಭಿಕ ಶಿಕ್ಷಣವನ್ನು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ ಪೂರೈಸಿದರು. ತಾಯಿ-ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಉನ್ನತ ಶಿಕ್ಷಣಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ, ಮತ್ತು ಮರಾಠಿ ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ಪಳಗಿದರು. ಆನಂತರ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಸಪ್ತಭಾಷಾ ನಟರಾಗಿ ಮಿಂಚಿದರು. ಸಹೋದರ ಶಂಕರ್ ನಾಗ್ ಅವರ ಕುರಿತಾಗಿ ‘ನನ್ನ ತಮ್ಮ ಶಂಕರ’ ಎನ್ನುವ ಪುಸ್ತಕ ಬರೆದಿದ್ದಾರೆ.