ಬರಹಗಾರ ಅಜಯ ಬಣಕಾರ ಅವರು ಜನಿಸಿದ್ದು 1976 ಜುಲೈ 22ರಂದು. ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. ದಾವಣಗೆರೆ ಯು.ಬಿ.ಡಿ.ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ಇವರು ತುಂಗಭದ್ರ ಬೋರ್ಡ್ ನಲ್ಲಿ ಸೆಕ್ಷನ್ ಆಫೀಸರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವಾಗಲೇ ಇವರು ಬರೆದ ಹಲವು ಕಥೆಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಕಟಿತ ಕೃತಿಗಳು:
ಹನಿಸಂಪಿಗೆ (ಹನಿಗವನ ಸಂಕಲನ)
ಹೂನಗೆ (ಹನಿಗವನ ಸಂಕಲನ)
ನೀನಿರದ ಭೂಮಿಯಲಿ(ಕವನ ಸಂಕಲನ)
ಭೂಮಿ ಹಿಡಿದ ಹೂ (ಕವನ ಸಂಕಲನ)
ಕೊಪ್ಪಳದಲ್ಲಿ ನಡೆದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ- ಪ್ರಶಸ್ತಿ ಸಂದಿವೆ.