ಕತೆಗಾರ್ತಿ ಆಶಾ ಹೆಗಡೆ ಹವ್ಯಾಸಿ ಪತ್ರಕರ್ತೆಯೂ ಹೌದು. 1958 ಅಕ್ಟೋಬರ್ 04 ಮಡಿಕೇರಿಯಲ್ಲಿ ಜನಿಸಿದರು. ತಂದೆ ಬಿ.ಎಸ್.ಗೋಪಾಲಕೃಷ್ಣ, ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ. ’ಆರೋಗ್ಯ ಅದುವೆ ಭಾಗ್ಯ, ನಾ ಕಂಡ ಪೇಜಾವರರು, ಈ ನೆಲದ ಕಥೆ’ ಅವರ ಕಥಾ ಸಂಕಲನಗಳು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.