ಆರ್ಕೆ ಮಣಿಪಾಲ (ರಘುಪತಿ ಶೆಮ್ತೂರು) ಅವರು 1952 ಏಪ್ರಿಲ್ 18ರಂದು ಉಡುಪಿಯಲ್ಲಿ ಜನಿಸಿದರು. ಪ್ರಸ್ತುತ ಮಣಿಪಾಲ ಕಾಲೇಜಿನ ಉಪನ್ಯಾಸಕರಾಗಿರುವ ಇವರು ಕವನ, ವಿಮರ್ಶೆ, ಕಥಾ ಪ್ರಾಕಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಷಣ್ಮುಖ, ಕಾವ್ಯಕನ್ನಿಕೆಯ ಸೆರಗು ಸರಿಸಿ, ಅಂಬೇಡ್ಕರ್, ನಮ್ಮೂರ ಕೊರಗನ ವಾಸ್ತವ, ಸೀತಾಯಣ (ವಿಮರ್ಶೆ), ಬಂಡಾಯದ ಕಥೆಗಳು (ಸಂಪಾದನೆ), ತೊಟ್ಟಿಕ್ಕುವ ಪದ್ಯಗಳು (ಕವನ ಸಂಕಲನ), ಶಿಕ್ಷಣ-ಸಮಾಜವಿಜ್ಞಾನ (ಸಂಪಾದನೆ) ಮುಂತಾದವು.